Nov 5, 2010

ಇರುಳಿನಿಂದ ಬೆಳಕಿನೆಡೆಗೆ..









ನಿನ್ನೆಯೆಂಬುದ ಮರೆತು   
ನಾಳೆಯಿದೆ, ಆದ ಅರಿತು
ಸಾರ್ಥಕಗೊಳಿಸು ಇಂದಿನಂತು!!














ಸಾಗುಸಾಗುತ ದೂರ
ಅರಿತು ಮರೆಯುತ ನೂರ
ತೊರೆಯದಿರು
ಈ ನಿನ್ನ ಮತಿಸಾರ!!












ಕತ್ತಲೆಯ ಕೋಣೆಯಲಿ
ಕಾಡುತಿಹ ಇರುಳಿನಲಿ
ದೀಪದೀಪದ ಸಾಲು ಹೊತ್ತುರಿಯಲಿ!!










ನಾನೆಂಬುದಾ ಸರಿಸಿ
ಸರ್ವರನು ಅನುಸರಿಸಿ
ನಡೆಯೀಗ ನೀ ಬಾಳ ಸತ್ಯವರಸಿ!!













                                     ಧನ್ಯವಾದಗಳು






ಇಂತಿ ನಿಮ್ಮ ನಲ್ಮೆಯ
ಕಾರ್ತೀಕ್



4 comments: